ಮಂಡ್ಯ : ಅಧಿಕಾರಕ್ಕಾಗಿ ಇದೀಗ ದಳಪತಿಗಳು ದೇವರ ಮೊರೆ ಹೋಗಿದ್ದಾರೆ. ಎಚ್.ಡಿ.ದೇವೇಗೌಡ, ಎಚ್.ಡಿ.ರೇವಣ್ಣ ಬಳಿಕ ಇದೀಗ ಕುಮಾರಸ್ವಾಮಿ ಯವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ರೇವಣ್ಣ ಅವರು ತಮ್ಮ ಪತ್ನಿ ಜೊತೆ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದ್ದರು. ಅಲ್ಲದೆ ಇತ್ತೀಚೆಗೆ ಅಮಾವಾಸ್ಯೆಯಂದು ಹೆಚ್ಡಿಡಿ ಕೂಡ ಪೂಜೆ ಸಲ್ಲಿಸಿದ್ದರು. ಇಂದು (ಭಾನುವಾರ) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪೂಜೆ ಸಲ್ಲಿಕೆಯಾಗಿದೆ. ಈ