ಮಣ್ಣಿನ ಮಗ ಟೈಟಲ್ಗಾಗಿ ಅಪ್ಪ-ಮಗ ಪೈಪೋಟಿ ನಡೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಜಿಲ್ಲೆಯ ಬಾಗೆಪಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಣ್ಣಿನ ಮಗ ಟೈಟಲ್ ಪಡೆಯಲು ಪ್ರಯತ್ನಿಸುತ್ತಿದ್ದರೆ, ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ನಾನೊಬ್ಬ ಪ್ರಾಮಾಣಿಕ ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಿರುವುದಾಗಿ ವ್ಯಂಗ್ಯವಾಡಿದ್ದಾರೆ. ಮಣ್ಣಿನ ಮಗ ಟೈಟಲ್ಗಾಗಿ ಅಪ್ಪ-ಮಗ ಪೈಪೋಟಿ ನಡೆಸಿದ್ದಾರೆ. ಹಾಗಾದ್ರೆ ನಾವ್ಯಾರು ಮಣ್ಣಿನ ಮಕ್ಕಳಲ್ಲವೇ? ಎಂದು ಪ್ರಶ್ನಿಸಿದ