ರಾಜ್ಯದಲ್ಲಿ ಜನತೆ ಸಾವಿರಾರು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಕ್ಯಾರೆ ಎನ್ನದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಕಪ್ಪ ವಿಚಾರವನ್ನೇ ಪ್ರಮುಖವಾಗಿಸಿಕೊಂಡು ಆರೋಪ, ಪ್ರತ್ಯಾರೋಪದಲ್ಲಿ ಮುಳುಗಿ ಜನದ್ರೋಹಿಯಾಗಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕಾಲೆಳೆಯುವುದರಲ್ಲಿಯೇ ಬಿಜಿಯಾಗಿವೆ. ಜನರ ಹಿತ ಕಾಯುವಂತಹ ಒಂದೇ ಒಂದು ಕಾರ್ಯಕ್ಕೆ ಮುಂದಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜನರು ಗುಳೆ