ಕುಂದಾನಗರಿಯಲ್ಲಿ ನಡೆದಿರುವ ಸರಣಿ ಕಳ್ಳತನದಿಂದ ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ನಡೆದಿದೆ.ಶಂಕರಲಿಂಗೇಶ್ವರ್ ಸೂಪರ್ ಬಜಾರ, ಮಹಾಲಕ್ಷ್ಮಿ ಮೆಡಿಕಲ್ ಶಾಪ್, ರಾಕೇಶ್ ಟೇಲರಿಂಗ್ ಶಾಪ್ ಮತ್ತು ಸ್ಟೇಷನರಿ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.ಹಣಕ್ಕಾಗಿ ಹುಡುಕಾಟ ನಡೆಸಿದ ಕಳ್ಳರ ಕರಾಮತ್ತು ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂವರು ಕಳ್ಳರ ಕೈಚಳಕ ಇದಾಗಿದ್ದು, ಸಿ ಸಿ ಕ್ಯಾಮರಾ ನೋಡಿ ಕ್ಯಾಮರಾ ಕಿತ್ತು ಹಾಕಿದ್ದಾರೆ