ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್`ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣ ಕುರಿತಂತೆ ಶಂಕೆ ಹಿನ್ನೆಲೆಯಲ್ಲಿ ನಿನ್ನೆ ತಾನೇ ಜೈಲಿನಿಂದ ಬಿಡುಗಡೆಯಾಗಿರುವ ಕುಣಿಗಲ್ ಗಿರಿಯನ್ನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಇವತ್ತು ಎಸ್`ಐಟಿ ಕಚೇರಿಗೆ ಆಗಮಿಸಿದ ಗಿರಿ ಅಧಿಕಾರಿಗಳನ್ನ ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಕೊಲೆ ನಡೆದ ದಿನದ ಆಸುಪಾಸಿನಲ್ಲಿ ಕುಣಿಗಲ್ ಗಿರಿ ಸಹಚರರು ಓಡಾಡಿರುವ ಮಾಹಿತಿ ಹಿನ್ನೆಲೆಯಲ್ಲಿ ಎಸ್ಐಟಿ ಕುಣಿಗಲ್ ಗಿರಿ ವಿಚಾರಣೆ ಮುಂದಾಗಿದ್ದರು