ಯಶ್ ನಟನೆಯ ‘ಕೆಜಿಎಫ್ 2’ಗೂ ಒಂದು ದಿನ ಮೊದಲು ವಿಜಯ್ ನಟನೆಯ ‘ಬೀಸ್ಟ್’ ರಿಲೀಸ್ ಆಗುತ್ತಿದೆ. ಏಪ್ರಿಲ್ 13ರಂದು ತೆರೆಕಾಣುತ್ತಿರುವ ‘ಬೀಸ್ಟ್’ ಕೂಡ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ತಮಿಳಿನಲ್ಲಿ ತಯಾರಾಗಿರುವ ಚಿತ್ರವು ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಯುಗಾದಿಯಂದು ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿತ್ತು. ಕಮರ್ಷಿಯಲ್ ಮಾಸ್ ಎಂಟರ್ಟೈನರ್ ಚಿತ್ರವಾಗಿರುವ ‘ಬೀಸ್ಟ್’ ಕತೆ ಬೇರೆ ಚಿತ್ರದಿಂದ ಪ್ರೇರಿತವಾದದ್ದೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಅದೇನೇ ಇದ್ದರೂ ವಿಜಯ್ಗೆ