ಮೇ. 4ರ ನಂತರ ಸಾರಿಗೆ ನೌಕರರ ಸಂಬಳ ಏರಿಕೆ ಖಚಿತ- ಸಚಿವ ಲಕ್ಷ್ಮಣ್ ಸವದಿ ಭರವಸೆ

ಬೆಂಗಳೂರು| pavithra| Last Modified ಮಂಗಳವಾರ, 6 ಏಪ್ರಿಲ್ 2021 (12:32 IST)
ಬೆಂಗಳೂರು : ಮೇ. 4ರ ನಂತರ ಸಾರಿಗೆ ನೌಕರರ ಏರಿಕೆ ಖಚಿತ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದ್ರೆ ಸದ್ಯಕ್ಕೆ 6ನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ. ಮೇ.4ರ ನಂತರ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಮೇ.4ರ ನಂತರ ಸಾರಿಗೆ ನೌಕರರ ಮುಖಂಡರ ಜತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ಸಮಸ್ಯೆ ಏನಾದರೊಂದು ಪರಿಹಾರ ಕಂಡುಹಿಡಿಯುವೆ. ಸಾರಿಗೆ ನೌಕರರು ಸರ್ಕಾರದ ಸಂಕಷ್ಟ ಅರ್ಥ ಮಾಡಿಕೊಳ್ಳಬೇಕು. ನೀತಿ ಸಂಹಿತೆ ಹಿನ್ನಲೆಯಲ್ಲಿ ಸಿಎಂ ಸಹ ಏನೂ ಮಾಡೋಕಾಗಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :