ಬೆಂಗಳೂರು: ಸಚಿವ ಸ್ಥಾನ ತಮಗೆ ನೀಡದೇ ಜಯಮಾಲಾಗೆ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದವೊಂದನ್ನು ಹುಟ್ಟುಹಾಕಿದ್ದರು.ಜಯಮಾಲಾ ಸೇವೆ ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಿರಬಹುದು ಎಂದಿದ್ದರು. ಆದರೆ ಅವರು ಬಳಸಿದ ಸೇವೆ ಪದ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ಜಯಮಾಲಾ ಕೂಡಾ ಅಸಮಾಧಾನಗೊಂಡಿದ್ದರು.ಇದೀಗ ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಇದಕ್ಕೆ ಸ್ಪಷ್ಟನೆ ನೀಡಿದ್ದು, ಸೇವೆ ಎಂದಿದ್ದು ಉತ್ತರ ಕರ್ನಾಟಕ ಶೈಲಿಯಲ್ಲಿ ಪಕ್ಷದ ಸೇವೆ ಎಂದು.