ಕೈ ಪಡೆಯ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತೆ ಸುದ್ದಿಗೆ ಬಂದಿದ್ದಾರೆ.ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ದಯಾಳುಗಳು ಆಗಬೇಕು. ರೈತರು ಎಸ್ ಟಿಪಿ ಘಟಕಕ್ಕೆ ಭೂಮಿ ಕೊಡುವ ಸ್ಥಿತಿಯಲ್ಲಿ ಇಲ್ಲ. ಘಟಕಕ್ಕೆ19 ಎಕರೆ ಭೂಮಿ ಬೇಕಾಗಿಲ್ಲ ನನ್ನ ಪ್ರಕಾರ ಅಂತ ಹೇಳಿದ್ದಾರೆ.ಪರಿಹಾರ ಎಷ್ಟೇ ಆದರೂ ರೈತರ ಮನವೊಲಿಸಿ ಭೂಮಿ ಪಡೆಯಬೇಕು. ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ. ಆದರೆ ರೈತರಿಗೆ ಅನ್ಯಾಯ ಮಾಡಲು ಬಿಡಲ್ಲ ಎಂದಿದ್ದಾರೆ.