ಹಾಸನ ಜಿಲ್ಲೆಯಲ್ಲಿ 2446 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ನೀಡಲಾಗಿತ್ತು. ಕೆಲವು ಪ್ರಭಾವಿಗಳು ಪಡೆದ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.ಹಾಸನದಲ್ಲಿ ಜಮೀನು ಗೋಲ್ ಮಾಲ್ ಭಾರಿ ಪ್ರಮಾಣದಲ್ಲಿ ನಡೆದಿದೆ ಎಂದು ಸ್ವತಃ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ. ಇದಲ್ಲದೇ ಐಐಟಿಗೆ ಮೀಸಲಾಗಿದ್ದ ಜಾಗವನ್ನು ಕಬಳಿಸಲು ಕೆಲವರು ಹುನ್ನಾರ ಮಾಡಿದ್ದಾರೆ. ಇದರಲ್ಲಿ KIADB ಅಧಿಕಾರಿ ಗಳು ಶಾಮೀಲಾಗಿದ್ದಾರೆ. ಈ ಅಕ್ರಮದ ಬಗ್ಗೆ ಉನ್ನತ ಮಟ್ಟದ