ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಸರ್ಕಾರಿ ಜಮೀನಗಳನ್ನು ರೈತರ ಜಮೀನಗಳನ್ನು ಅತಿಕ್ರಮಣ ಮಾಡಿರುವುದಲ್ಲದೆ ರಾಜಕಾಲುವೆಯ ದಾಖಲೆಗಳನ್ನು ತಿದ್ದಿ ಆ ಜಾಗದಲ್ಲಿ ಅವರ ಒಡೆತನದ ಸೌಧಾಮಿನಿ ಅಪಾರ್ಟ್ ಮೆಂಟ್ ಕಟ್ಟಿಕೊಂಡಿದ್ದಾರೆ. ಇಷ್ಟಲ್ಲದೆ ಕೆರಗಳನ್ನು ಒತ್ತುವರಿ ಮಾಡಿಕೊಂಡಿರುವುದರ ಬಗ್ಗೆ ದಾಖಲೆಗಳಿವೆ. ರೈತರ ಜಮೀನಗಳನ್ನು ಕಬಳಿಸಿ ರೈತರಿಗೆ ವಂಚನೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ರೈತರ ಮೇಲೆ ದೌರ್ಜನ್ಯ ಎಸಗಿರುವುದರ ವಿರುದ್ದ ವಿ ವಿರೇಶ್ ಆಕ್ರೋಶ ವ್ಯಕಪಡಿಸಿದರು. ಹೋರಾಟ ಮಾಡಲು ಅನುಮತಿ ಕೇಳಿ ಅಧಿಕಾರಿಗಳಿಗೆ ಮನವಿ