ಚಿಕ್ಕಬಳ್ಳಾಪುರ : ವಿಶ್ವವಿಖ್ಯಾತ ನಂದಿಗಿರಿಧಾಮದ ರಸ್ತೆಯಲ್ಲಿ ಮತ್ತೊಮ್ಮೆ ಗುಡ್ಡ ಕುಸಿತವಾಗಿದ್ದು, ಮಾರ್ಗ ಮಧ್ಯೆ ಬೃಹತ್ ಬಂಡೆಯೊಂದು ಉರುಳುವ ಆತಂಕ ಎದುರಾಗಿದೆ. ಮಿರ್ಜಾ ಸರ್ಕಲ್ ಮುಂಭಾಗದ ತಿರುವಿನಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಗೆ ನಂದಿಬೆಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಮಣ್ಣು ಹಾಗೂ ಬಂಡೆಗಳು ರಸ್ತೆಯ ಮುಕ್ಕಾಲು ಭಾಗ ಆವರಿಸಿವೆ.ಇದೀಗ ಮತ್ತೊಂದು ಬೃಹದಾಕಾರದ ಬಂಡೆ ಸಹ ಉರುಳುವ ಆತಂಕ ಎದುರಾಗಿದೆ. ಸದ್ಯ ಆತಂಕದಲ್ಲೇ ನಂದಿಬೆಟ್ಟ ಕ್ಕೆ ವಾಹನಗಳು ಸಂಚರಿಸುತ್ತಿವೆ.ಕಳೆದ ಜೂನ್ ತಿಂಗಳಿನಲ್ಲಿಯೂ