ಬೆಂಗಳೂರು : ಫೆಬ್ರುವರಿ 12ರಿಂದ 17ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 ಪ್ರದರ್ಶನದಲ್ಲಿ ಭಾರತದಲ್ಲಿನ ಯು.ಎಸ್. ಮಿಷನ್ನ ಚಾರ್ಜೆ ಡಿ ಅಫೇರ್ಸ್ ರಾಯಭಾರಿ ಎಲಿಜಬೆತ್ ಜೋನ್ಸ್ ಅವರು ಈವರೆಗಿನ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಿ ಪಾಲ್ಗೊಳ್ಳಲಿದ್ದಾರೆ.ಅಮೆರಿಕ ವೈಮಾನಿಕ ಉದ್ಯಮ ಹಾಗೂ ಸೇನಾಪಡೆಯ ವಿಶ್ವ ದರ್ಜೆಯ ಉಪಕರಣಗಳು, ತರಬೇತಿ, ತಾಕತ್ತು ಹಾಗೂ ಜಂಟಿ ಅಭ್ಯಾಸದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಲು ನನಗೆ