ಹಾಡಹಗಲೇ ವಕೀಲನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನ ಆರೋಪಿಗಳ ವಿರುದ್ಧ ಕಲಬುರಗಿ ವಿವಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.. ಆರೋಪಿಗಳಾದ ನೀಲಕಂಠ ಪಾಟೀಲ್, ವಿಜಯಕುಮಾರ್, ಸಿದ್ದಣ್ಣಗೌಡ, ಸಿದ್ರಾಮ್, ಅವ್ವಣ್ಣ, ಗುರು ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.ಕೋರ್ಟ್ಗೆ ತೆರಳುತ್ತಿದ್ದ ವೇಳೆ ಶ್ರೀಗಂಗಾ ವಿಹಾರ್ ಅಪಾರ್ಟ್ಮೆಂಟ್ ಬಳಿ ವಕೀಲ ವೀರಣ್ಣ ಗೌಡರನ್ನ ಮಾರಕಾಸ್ತ್ರಗಳಿಂದ ಹಂತಕರು ಅಟ್ಟಾಡಿಸಿ ಹತ್ಯೆ ಮಾಡಿದ್ರು.. ಸದ್ಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿರುವ ಆರೋಪ