ಪೊಲೀಸ್ ದೌರ್ಜನ್ಯ ಖಂಡಿಸಿ ವಕೀಲರ ಪ್ರತಿಭಟನೆ

ಚಾಮರಾಜನಗರ, ಮಂಗಳವಾರ, 12 ಫೆಬ್ರವರಿ 2019 (20:10 IST)

ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನೂರಾರು ವಕೀಲರು ಪ್ರತಿಭಟಿಸಿದ್ದಾರೆ.

ಚಾಮರಾಜನಗರದ ಜಿಲ್ಲಾ ನ್ಯಾಯಾಲಯದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಜಿಲ್ಲಾ ವಕೀಲರ ಸಂಘದ ಸದಸ್ಯರು, ತಮ್ಮ ಸಹೋದ್ಯೋಗಿ ವಕೀಲ ರವಿ ಎಂಬುವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಸುಳ್ಳು ದೂರು ದಾಖಲಿಸಿದ್ದಾರೆ. ಅಲ್ಲದೇ ದಾಖಲಿಸದೇ, ಯಾವುದೇ ಸರ್ಚ್ ವಾರೆಂಟ್ ಇಲ್ಲದೇ ಮನೆಗೆ ನುಗ್ಗಿ, ವಕೀಲನ ಮೇಲೆ ಗುಂಡ್ಲುಪೇಟೆ ಇನ್ಸ್‍ಪೆಕ್ಟರ್ ಬಾಲಕೃಷ್ಣ ಹಲ್ಲೆ ನಡೆಸಿದ್ದು, ಠಾಣೆಯಲ್ಲೂ ಸಹ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ.

ಇದನ್ನು ಖಂಡಿಸಿ ಒಂದು ವಾರದಿಂದಲೂ ಕಲಾಪಗಳಿಂದ ದೂರ ಉಳಿದು ಗುಂಡ್ಲುಪೇಟೆ ಠಾಣೆಯ ಪಿಎಸ್‍ಐ ಮತ್ತು ಸಿಪಿಐ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸೌಜನ್ಯಕ್ಕೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನಮ್ಮನ್ನ ಮಾತನಾಡಿಸಿಲ್ಲ ಎಂದು ದೂರಿದರು. ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸದಿದ್ರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ವಕೀಲರ ಸಂಘ ಎಚ್ಚರಿಸಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಕಮಲ ಜ್ಯೋತಿ’ ಆಂದೋಲನಕ್ಕೆ ಬಿಜೆಪಿ ರೆಡಿ

ಮೈತ್ರಿ ಸರಕಾರದ ವಿಫಲತೆ ವಿರುದ್ಧ ಬಿಜೆಪಿ ಆಂದೋಲನ ಹಮ್ಮಿಕೊಂಡಿದೆ.

news

ಡ್ರಾಪ್ ಕೊಡುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

ಡ್ರಾಪ್ ಕೊಡುವುದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ...

news

ಸುಟ್ಟು ಕರಕಲಾದ ಬಸ್: ಮೂವರು ಸಾವು

ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ ಹೊತ್ತಿ ಉರಿದು, ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.

news

ಸಿಟಿ ಬಸ್ ನಲ್ಲಿ ಕಳ್ಳರ ಕೈಚಳಕ; ಮಹಿಳೆ ಪರೇಶಾನ್!

ಸಿಟಿ ಬಸ್ ನಲ್ಲಿ ಚಳ್ಳರು ತಮ್ಮ ಕೈಚಳಕ ತೋರಿ ಮಹಿಳೆಯೊಬ್ಬರನ್ನು ಯಾಮಾರಿಸಿದ ಘಟನೆ ನಡೆದಿದೆ.