ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್, ಪೊಲೀಸರ ಮೇಲೆ ನಡೆದ ಹಲ್ಲೆ ಘಟನೆ ಕುರಿತಂತೆ ಗೂಂಡಾ ಕಾಯ್ದೆಯಡಿ ಶಾಸಕ ಜಮೀರ್ ಅಹ್ಮದ್ ರನ್ನು ಬಂಧನ ಮಾಡಬೇಕು. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ. ಗಲಭೆ ಕುರಿತಂತೆ ಆರೋಪಿಗಳ ಪರವಾಗಿ ನಿಂತಂತೆ ಜಮೀರ್ ಅಹ್ಮದ್ ಮಾತನಾಡುವುದು ಸರಿಯಲ್ಲ. ಪಾದರಾಯನಪುರ ಕೇಸ್ ನಲ್ಲಿ ಅಲ್ಲಿನ ಗಲಭೆ, ಗುಂಡಾಗಿರಿಗೆ ಜನಪ್ರತಿನಿಧಿಯೇ ಬೆನ್ನಿಗೆ ನಿಂತಿರುವುದು ಕಾನೂನು ವಿರುದ್ಧವಾದದ್ದು ಎಂದು ಟೀಕೆ ಮಾಡಿದ್ದಾರೆ.