ಮುಖ್ಯಮಂತ್ರಿಗಳೇ ನಿಮ್ಮ ಸ್ಪರ್ಧೆ ಸವಾಲ್ನ್ನು ಸ್ವಿಕರಿಸುತ್ತೇನೆ. ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ. ಕ್ಷೇತ್ರದ ಜನತೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಶಾಸಕ ಲಕ್ಷ್ಮಣ್ ಸವದಿ ಎಂದು ಗುಡುಗಿದ್ದಾರೆ. ಪ್ರಧಾನಿ ಮೋದಿಯವರನ್ನು ಏಕವಚನದಲ್ಲಿ ಟೀಕಿಸುವುದು ಸರಿಯಲ್ಲ. ಗೌರವ ಕೊಟ್ಟು ಗೌರವ ಪಡೆಯುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು. ಮುಖ್ಯಮಂತ್ರಿಗಳು ಜನರನ್ನು ಕೇಳುವ ಬದಲಿಗೆ ಬ್ಲ್ಯೂಫಿಲ್ಮ್ ಬಗ್ಗೆ ತಮ್ಮ ಸಚಿವರನ್ನು ಕೇಳಿದರೆ ಉತ್ತಮವಾಗಿರುತ್ತದೆ.