ಸರಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ. ಹೀಗಂತ ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಆರೋಪ ಮಾಡಿದ್ದಾರೆ.ಪಿಯುಸಿ ಉಪನ್ಯಾಸಕರು ಮೌಲ್ಯ ಮಾಪನವನ್ನು ಬಹಿಷ್ಕಾರ ಹಾಕುವುದಾಗಿ ಹೇಳುತ್ತಿದ್ದಾರೆ. 2 ನೇ ಹೆಚ್ಚುವರಿ ವೇತನ ಭತ್ಯೆ, ಕಾಲ್ಪನಿಕ ವೇತನ ಸೇರಿದಂತೆ ಅನೇಕ ಬೇಡಿಕೆ ಈಡೇರಿಸಲು ಉಪನ್ಯಾಸಕರು ಆಗ್ರಹಿಸುತ್ತಲೇ ಬಂದಿದ್ದಾರೆ.ಇತ್ತೀಚೆಗೆ ಸಕಾಲಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ಆರು ತಿಂಗಳಿಂದ ಸಂಬಳ ಇಲ್ಲ. ಈ ನಡುವೆ ಮೇ ಮೊದಲ ವಾರದಿಂದಲೇ ತರಗತಿ ಆರಂಭಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.