ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಇದರ ಮಧ್ಯೆ ಮೂರು ದಿನದಿಂದ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಮೈಸೂರು ಅರಮನೆ ಛಾವಣಿ ಸೋರುತ್ತಿದೆ. ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್ ಮತ್ತು ಕಲ್ಯಾಣ ಮಂಟಪದಲ್ಲಿ ನೀರು ಸೋರುತ್ತಿದ್ದು, ನೆಲಹಾಸುಗಳು ಮಳೆ ನೀರಿನಿಂದ ಒದ್ದೆಯಾಗಿವೆ. ನಾಡಹಬ್ಬ ದಸರಾ ನಡೆಯುತ್ತಿರುವ ಬೆನ್ನಲ್ಲೇ ಅರಮನೆಗೆ ಈ ಸ್ಥಿತಿ ಬಂದಿದೆ. ರತ್ನ ಖಚಿತ ಸಿಂಹಾಸನ ಕೂಡ ದರ್ಬಾರ್ ಹಾಲ್ ನಲ್ಲೇ ಇದೆ. ಸಿಂಹಾಸನ ವೀಕ್ಷಣೆಗೆ