Widgets Magazine

ಕುರ್ಚಿ ಉಳಿಸಿಕೊಳ್ಳೋದನ್ನು ಬಿಡಿ : ಸಿಎಂಗೆ ಸಿದ್ದರಾಮಯ್ಯ ಟಾಂಗ್

ಬೆಂಗಳೂರು| Jagadeesh| Last Modified ಶುಕ್ರವಾರ, 18 ಸೆಪ್ಟಂಬರ್ 2020 (20:16 IST)
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯ ಚರ್ಚೆ ನಡೆಯುತ್ತಿರುವ ನಡುವೆಯೇ ದೆಹಲಿಗೆ ಸಿಎಂ ತೆರಳಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ವೇಳೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಬಗ್ಗೆ ಮಾತನಾಡದೇ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಎಂದು ವಿಪಕ್ಷ ನಾಯಕ ಟಾಂಗ್ ನೀಡಿದ್ದಾರೆ.

ಸರಣಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ಖಡಕ್ ಆಗಿ ರಾಜ್ಯದ ಹಿತದೃಷ್ಟಿಗಾಗಿ ನಾಲ್ಕು ಮಾತನಾಡಿ ಎಂದಿದ್ದಾರೆ.

ಅಲ್ಲದೇ, ಅತಿವೃಷ್ಟಿ ಹಾಗೂ ಬಾಕಿ ಪರಿಹಾರ ಹಣ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ ಮಾಡಿ ಎಂದಿದ್ದಾರೆ.
 

ಇದರಲ್ಲಿ ಇನ್ನಷ್ಟು ಓದಿ :