ಕೆಂಪು ವಲಯವಿಲ್ಲದ ಅಂತರ ರಾಜ್ಯದ ಪ್ರದೇಶಗಳಿಗೆ ಬಸ್ ಓಡಿಸಲು ಚರ್ಚೆ ನಡೆದಿದೆ. ಸದ್ಯದಲ್ಲಿ ಈ ಕುರಿತು ಸರಕಾರ ನಿರ್ಧಾರ ಪ್ರಕಟಿಸಲಿದೆ. ಒಟ್ಟಾರೆ ನಷ್ಟವನ್ನು ಸರಿದೂಗಿಸಲು ಲಾಭವಲ್ಲದ ಮಾರ್ಗಗಳಲ್ಲಿ ಬಸ್ ಸಂಚಾರ ಕಡಿಮೆ ಮಾಡುವುದು, ಅನಾವಶ್ಯಕವಾಗಿರುವ ಸಿಬ್ಬಂದಿ ಕಡಿಮೆ ಮಾಡುವುದು, ಮೊದಲಾದ ಕ್ರಮ ತೆಗೆದುಕೊಳ್ಳಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟವನ್ನು ಇನ್ನು ಎರಡು ತಿಂಗಳ ಕಾಲ ರಾಜ್ಯ ಸರ್ಕಾರವೇ ಭರಿಸಬೇಕಿದೆ.