ವಿಜಯಪುರ : ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ರಹಸ್ಯ ಇದೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಎಚ್ಡಿಕೆ ಸವಾಲು ಹಾಕಿದರು. ನನ್ನ ಚರಿತ್ರೆ ಇದ್ದರೆ, ತಂದು ಬಿಡಿ. ನನ್ನ ಬಗ್ಗೆ ಏನೇನು ಗೊತ್ತಿದೆ ಎಲ್ಲಾನು ತಂದು ಬಿಡಿ. ಪಾಪ ನನ್ನ ಜೊತೆಗೆ ಜೆಡಿಎಸ್ ನಲ್ಲಿ ಎರಡು ವರ್ಷ ಇದ್ದರು.