ಮುನಿಯಪ್ಪರಿಂದ ಕೇಂದ್ರ ಸಚಿವರ ಭೇಟಿ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ತೆಲಂಗಾಣ, ಪಂಜಾಬ್, ಆಂಧ್ರ ದಿಂದ ಅಕ್ಕಿ ಕೊಡುವ ಬಗ್ಗೆ ಹೇಳಿದ್ದಾರೆ.ಸರ್ಕಾರದ ಸಂಸ್ಥೆಗಳಿಂದ ಅಕ್ಕಿ ಪಡೆಯುವ ಕೆಲಸ ಮಾಡ್ತಿದ್ದೇವೆ.ಮುನಿಯಪ್ಪ ಸೆಂಟ್ರಲ್ ಮಿನಿಸ್ಟರ್ ಭೇಟಿ ಮಾಡ್ತಿದ್ದಾರೆ.ಗೋಯಲ್ ಜೊತೆ ಮಾತಾಡೋದಾಗಿ ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ.ನೋಡೋಣ ಕಾಯೋಣ ಏನ್ ಮಾಡ್ತಾರೆ ಅಂತಾ ಈ ಸರ್ಕಾರ ಹಸಿದವರಿಗೆ ಸಹಾಯ ಮಾಡ್ತಿದೆ ಜನರು ಮಾತಾಡ್ತಿದ್ದಾರೆ.ನಮ್ಮ ಅಕ್ಕ ತಂಗಿ ಎಲ್ಲರೂ ಬಸ್ಸಿನಲ್ಲಿ ಓಡಾಡ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.