ಹಾಸನ : ಸಿಎಂ ಸಿದ್ದರಾಮಯ್ಯ ಅವರು ಚಾಮುಂಡಿ ತಾಯಿಗೂ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ದುಡ್ಡು ಕೊಟ್ಟು ನಮಗೆ ಶಕ್ತಿ ಕೊಡು ಎಂದು ಕೇಳಿದ್ದಾರೆ. ಆ ಗ್ಯಾರಂಟಿ ಹೇಗೆ ನಡೆಯುತ್ತದೆ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೃಹಲಕ್ಷ್ಮೀ ಯೋಜನೆ ಎಷ್ಟು ದಿನ ನಡೆಯುತ್ತದೆ ಎಂದು ಈಗ ಹೇಳುವುದಿಲ್ಲ. ಮೂರ್ನಾಲ್ಕು ತಿಂಗಳು ಕಾಯೋಣ, ಆಮೇಲೆ ಹೇಗೆ ಮುಂದುವರೆಯುತ್ತದೆ ಎಂದು ನೋಡೋಣ