ಬೆಂಗಳೂರು : ದೋಸ್ತಿ ಸರ್ಕಾರದಲ್ಲಿ ಏನೂ ಸರಿ ಇಲ್ಲ. ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯ ಇಲ್ಲ ಎಂಬ ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಈ ಬಗ್ಗೆ ಮಾತನಾಡಿದ ಯಡಿಯೂರಪ್ಪನವರು, ನಾವು105 ಜನ ಶಾಸಕರಿದ್ದೇವೆ. ಮಧ್ಯಂತರ ಚುನಾವಣೆ ಆಗಲು ಬಿಡುವುದಿಲ್ಲ. ಯೋಗ್ಯತೆ ಇದ್ರೆ ಆಡಳಿತ ಮಾಡಲಿ ಇಲ್ಲದಿದ್ದರೆ ಬಿಟ್ಟು ಹೋಗಲಿ ಎಂದು ಸಮ್ಮಿಶ್ರ ಸರ್ಕಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕಾಂಗ್ರೆಸ್ ನವರು ಮಧ್ಯಂತರ ಚುನಾವಣೆ ಬೇಡ