ಒಂದೇ ರಾಜ್ಯದಲ್ಲಿ ನಮಗೆ ಬೇಕಾದಷ್ಟು ಅಕ್ಕಿ ಸಿಗಲ್ಲ.ಎರಡ್ಮೂರು ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತೇವೆ.ಅಕ್ಕಿ ಖರೀದಿಗೆ ಒಂದು ಪಾಲಿಸಿ ಇದೆ.ಆ ಪಾಲಿಸಿ ಪ್ರಕಾರವೇ ಕೇಂದ್ರ ಖರೀದಿ ಮಾಡುತ್ತೆ.ಹಾಗಾಗಿ ಅದೆ ಮಾದರಿಯನ್ನು ನಾವು ಅನುಸರಿಸುತ್ತವೆ.ಹಣಕಾಸು ಹೆಚ್ಚಾಗದ ಹಾಗೆ ನಡೆ ಅನುಸರಿಸುತ್ತೇವೆ.ನಮ್ಮ ಹೈಕಮಾಂಡ್ ಭೇಟಿ ಮಾಡಲು ಸಚಿವ ನಿಯೋಗ ಹೋಗುತ್ತಿದ್ದೇವೆ.ಅವರ ಜೊತೆ ಚರ್ಚೆ ಮಾಡುತ್ತೇವೆ.ದೆಹಲಿ ಮಟ್ಟದಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ.ಹೈಕಮಾಂಡ್ ಸಲಹೆ ಸೂಚನೆಗಳನ್ನು ಪಡೆದುಕೊಂಡು ಬರುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.