ಸಿಎಂ ನಮ್ಮ ಫ್ರೆಂಡ್ಸ್ ಗೆ ಏನೇನು ಗಿಫ್ಟ್ ತರ್ತಾರೆ ನೋಡೋಣ- ಅನರ್ಹ ಶಾಸಕರನ್ನು ಲೇವಡಿ ಮಾಡಿದ ಡಿಕೆಶಿ

ಬೆಂಗಳೂರು, ಶುಕ್ರವಾರ, 16 ಆಗಸ್ಟ್ 2019 (13:44 IST)

ಬೆಂಗಳೂರು : ಬಿಜೆಪಿ ಸಂಪುಟ ಸೇರುವ ವಿಚಾರದಲ್ಲಿ ಮೈತ್ರಿ ಸರ್ಕಾರದಿಂದ ಅನರ್ಹಗೊಂಡ ಶಾಸಕರನ್ನು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ  ಮುಂದಾದ ರಾಜೀನಾಮೆ ನೀಡಿದ ಶಾಸಕರಿಗಾಗಿ 10 ಸಚಿವ ಸ್ಥಾನಗಳನ್ನು ಕಾಯ್ದಿರಿಸಲಾಗಿದ್ದು, ಉಳಿದ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.


 ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಫ್ರೆಂಡ್ಸ್ ಗೆ ಏನೇನು ಗಿಫ್ಟ್ ತರ್ತಾರೆ ನೋಡೋಣ. ಅವರೆಲ್ಲರೂ ಚೆನ್ನಾಗಿರಲಿ, ಅವರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರಿಗೆ ಹೂವು ಗಿಫ್ಟ್ ತೆಗೆದುಕೊಂಡು ಹೋಗಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರವಾಹ ಪೀಡಿತ ಪ್ರದೇಶಗಳಿಗೆ ದಾನಿಗಳ ಹೆಸರಿಡುವ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಪ್ರವಾಹ ಪೀಡಿತ ಪ್ರದೇಶಗಳ ಪುನಶ್ಚೇತನಕ್ಕೆ ನೆರವಾಗುವ ದಾನಿಗಳ ಹೆಸರನ್ನು ಗ್ರಾಮಕ್ಕೆ ಇಡುವ ...

news

ಜೀರೋ ಟ್ರಾಫಿಕ್ ಮೂಲಕ ಮೈಸೂರಿನಿಂದ ಜೀವಂತ ಅಂಗಾಂಗಗಳನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ

ಮೈಸೂರು : ಮೈಸೂರಿನಿಂದ ವ್ಯಕ್ತಿಯೊಬ್ಬನ ವಿವಿಧ ಜೀವಂತ ಅಂಗಾಂಗಗಳನ್ನು ಬೆಂಗಳೂರಿನ ಆಸ್ಪತ್ರೆಗಳಿಗೆ ...

news

ಬಿಜೆಪಿ ಸಚಿವ ಸಂಪುಟದಲ್ಲಿ ಅನರ್ಹ ಶಾಸಕರಿಗೆ ಸಿಗುತ್ತಾ ಸಚಿವ ಸ್ಥಾನ ?

ಬೆಂಗಳೂರು : ಮೈತ್ರಿ ಸರ್ಕಾರದಿಂದ ಅನರ್ಹಗೊಂಡ ಅತೃಪ್ತ ಶಾಸಕರಿಗೆ ಬಿಜೆಪಿ ಕಡೆಯಿಂದ ಬಂಪರ್ ಆಫರ್ ಸಿಗಲಿದೆ ...

news

ಸಂಪುಟ ವಿಸ್ತರಣೆ ಹಿನ್ನಲೆ; ಇಂದು ಸಿಎಂ ಯಡಿಯೂರಪ್ಪ ರಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ

ಬೆಂಗಳೂರು : ರಾಜ್ಯ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಲು ಇಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ...