ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಇವಿಎಂ ಬೇಡ ಎಂದು ವಿರೋಧಿಸಿ ಕಾಂಗ್ರೆಸ್ ನಿಂದ ಪತ್ರ ಚಳುವಳಿ ಆರಂಭಗೊಂಡಿದೆ.ಕೆಪಿಸಿಸಿ ಮಹಿಳಾ ಘಟಕ ವತಿಯಿಂದ ಪತ್ರಚಳುವಳಿ ನಡೆಸಲಾಯಿತು. ಬೆಂಗಳೂರು ನಗರದ ಅಂಚೆ ಕಚೇರಿ ಮುಂಭಾಗ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನಾ ಪತ್ರ ಚಳುವಳಿ ನಡೆಸಿದ ಮಹಿಳಾ ಕಾರ್ಯಕರ್ತರು, ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತಕ್ಕೆ ಇವಿಎಂ ಮತದಾನ ಮಾರಕವಾಗಿ ಪರಿಣಮಿಸುತ್ತಿದೆ.ಇವಿಎಂ ಬೇಡ, ಮತಪತ್ರ ಬೇಕು ಎಂದು ಆಗ್ರಹಿಸಿದರು.