ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನರಿಗೆ ನೀರಿನ ದರ ಹೆಚ್ಚಳ ಮೂಲಕ ಶಾಕ್ ನೀಡಲು ಜಲಮಂಡಲಿ ಸಿದ್ಧತೆ ನಡೆಸಿದೆ. ವಿದ್ಯುತ್ ದರ ಏರಿಕೆ, ಪೆಟ್ರೋಲ್, ಡೀಸೆಲ್ ದರ ಏರಿಕೆ, ಆಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯ ಬೆನ್ನ ಹಿಂದೆಯೇ ಬೆಂಗಳೂರು ನಗರದ ನಾಗರಿಕರಿಗೆ ನೀರಿನ ದರ ಏರಿಕೆಯ ಬರೆ ಹಾಕಲು ಜಲಮಂಡಳಿ ಮುಂದಾಗಿದೆ.ಬೆಂಗಳೂರು ನಗರದ ನಾಗರಿಕರಿಗೆ ಕುಡಿಯುವ ನೀರು ಒದಗಿಸುವ ಬೆಂಗಳೂರು ಜಲಮಂಡಳಿ ನೀರಿನ ದರವನ್ನು ಶೇ. 30