ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಲೈಟ್ ಕಂಬ

ಚಿಕ್ಕಬಳ್ಳಾಪುರ, ಗುರುವಾರ, 8 ನವೆಂಬರ್ 2018 (16:17 IST)

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಒಂದು ಗಂಟೆಗೂ ಹೆಚ್ಚು ಸಮಯ ಲೈಟ್ ಕಂಬ  ಹೊತ್ತಿ ಉರಿದ ಘಟನೆ ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಒಂದು ಗಂಟೆಗೂ ಹೆಚ್ಚು ಸಮಯ ಹೊತ್ತಿ ಉರಿಯುತ್ತಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ನಡೆದಿದೆ.

ಊರ ಮಧ್ಯದಲ್ಲಿರುವ ಕಂಬದಲ್ಲಿ ಪದೇ ಪದೇ ಇದೇ ರೀತಿ ಹೊತ್ತಿ ಬೆಂಕಿ ಉರಿಯುತ್ತಿರುವ ಘಟನೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇದು ಊರಿನ ಮುಖ್ಯ ರಸ್ತೆ ಆಗಿದ್ದು ಎಲ್ಲರೂ ಇಲ್ಲೆ ನಡೆದಾಡಬೇಕಾಗಿದೆ.  ಹಳೆಯ ಕಂಬಗಳಾಗಿದ್ದು ವಿದ್ಯುತ್ ತಂತಿಗಳ ನಡುವೆ ಅಂತರ ಕಮ್ಮಿ ಇರುವುದೇ ಅವಘಡಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಹೆಚ್ಚಿನ ಅಪಾಯ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ದೀಪಾವಳಿ ಹಬ್ಬದ ಪಟಾಕಿ ದೃಶ್ಯದಂತೆ ವಿದ್ಯುತ್ ಕಂಬದಲ್ಲಿ ಬೆಂಕಿ ಕಂಡ ಗ್ರಾಮಸ್ಥರು ಭಯದೊಂದಿಗೆ ಆಶ್ಚರ್ಯ ವ್ಯಕ್ತಪಡಿ ಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮರ್ಯಾದಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ನಾಲ್ಕು ತಿಂಗಳ ಗರ್ಭಿಣಿಯನ್ನು ಮರ್ಯಾದೆ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ...

news

ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದ ಮಾಜಿ ಶಾಸಕ

ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

news

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸಹೋದರನ ವಿರುದ್ಧ ಕೇಸ್: ರಾಜಕೀಯ ಪ್ರೇರಿತ ಆರೋಪ

ಸ್ಟೋನ್ ಕ್ರಷರ್ ಪ್ರಕರಣದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸಹೋದರನ ವಿರುದ್ಧ ಪ್ರಕರಣ ...

news

ದನ ಬೆದರಿಸುವ ಹಬ್ಬದ ಸಂಭ್ರಮ

ದನ ಬೆದರಿಸುವ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ದನಗಳಿಗೆ ವಿಶೇಷ ...