ಬೆಂಗಳೂರು-ಅಬಕಾರಿ ಇಲಾಖೆಯಿಂದ ಕೆ.ಆರ್.ಪುರ ಹಾಗೂ ಮಹದೇವಪುರ ವಲಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.ಗೋವಾದಿಂದ , ಅಕ್ರಮವಾಗಿ ನಗರಕ್ಕೆ ಸರಬರಾಜು ಮಾಡುತ್ತಿದ್ದ ಕಂಟೈನರ್ ವಾಹನ ಜಪ್ತಿ ಮಾಡಿದ್ದಾರೆ.ಬರೋಬ್ಬರಿ 50 ಲಕ್ಷ ಮೌಲ್ಯದ ಮದ್ಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಕಂಟೈನರ್ ವಾಹನದ ಮೇಲೆ ಮದ್ಯವಿರುವ ನೂರಾರು ಬಾಕ್ಸ್ ಗಳನ್ನ ಇಟ್ಟು ಟಾರ್ಪಲ್ ಹಾಕಿದ್ರು.ಗೋವಾದಿಂದ ನಗರಕ್ಕೆ ಬರುವ ಯಾವ ಚೆಕ್ ಪೋಸ್ಟ್ ಗಳಿಗೂ ಸಿಕ್ಕಿ ಹಾಕಿಕೊಳ್ಳದೆ ಕಳ್ಳಾಟ ಮೆರೆದಿದ್ರು.