ಬೆಂಗಳೂರು : ಈಗಾಗಲೇ ಬಿಬಿಎಂಪಿ ಮೇಯರ್ ಚುನಾವಣೆಯನ್ನು ಮುಂದೂಡುತ್ತಾ ಬಂದ ಸರ್ಕಾರ ಇದೀಗ ಮತ್ತೆ ಮೇಯರ್ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ಮೇಯರ್ –ಉಪಮೇಯರ್ ಚುನಾವಣೆ ನಡೆಯಬೇಕಿತ್ತು. ಆದರೆ ಎಲೆಕ್ಷನ್ ಮುಂದೂಡಲು ಬಿಜೆಪಿ ನಾಯಕರು ಹುನ್ನಾರ ಮಾಡಿದ್ದು ಚುನಾವಣೆ ಮುಂದೂಡುವ ಬಗ್ಗೆ ಸಿಎಂ ಕಚೇರಿಗೆ ಫೈಲ್ ರವಾನಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ನಗರಾಭಿವೃದ್ಧಿ ಇಲಾಖೆಯಿಂದ ಸಿಎಂ ಕಚೇರಿಗೆ ಫೈಲ್ ರವಾನೆಯಾಗಿರುವುದಾಗಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ ಮಾಹಿತಿ