ಬಿಜೆಪಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದ ಬೆನ್ನಲ್ಲೇ ಮೈಕೊಡವಿ ಎದ್ದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಇಂದು ಸಂಜೆ ಘೋಷಣೆ ಮಾಡಲಿದೆ.ಕಾಂಗ್ರೆಸ್ ಮುಖಂಡರು ನಿನ್ನೆ ನಡೆಸಿದ ಸಭೆಯಲ್ಲಿ ಜಾತಿ ಲೆಕ್ಕಾಚಾರದ್ದೇ ಸದ್ದು ಜೋರಾಗಿತ್ತಂತೆ. ಲಿಂಗಾಯತ, ಕುರುಬ, ಅಲ್ಪಸಂಖ್ಯಾತರ ವಿಚಾರದಲ್ಲಿ ಜಾತಿ ಲೆಕ್ಕಾಚಾರ ಗಣನೆಗೆ ತೆಗೆದುಕೊಂಡು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ.ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಧರ್ಮದ ಪ್ರಕಾರ ಇರುವ 20 ಕ್ಷೇತ್ರಗಳಲ್ಲಿ ಎರಡು ಎಸ್ ಟಿ, ಮೂರು ಎಸ್ಸಿ,