ಬಿಸಿಲೂರಿನಲ್ಲಿ ಸಾಹಿತ್ಯ ಸಮ್ಮೇಳನದ ಸಡಗರ

ಕಲಬುರಗಿ, ಶನಿವಾರ, 8 ಡಿಸೆಂಬರ್ 2018 (20:30 IST)

ಜಾಗತೀಕರಣ ಪ್ರಭಾವದ ಕಾರಣ ಜೀವನದ ನಿರ್ವಹಣೆಗಾಗಿ ಇಂಗ್ಲೀಷ್ ಕಲಿಯಿರಿ. ಹಾಗಂತ ಮಾತೃ ಭಾಷೆಯಾಗಿರುವ ಹಾಗೂ ನಮ್ಮ ಸಾಂಸ್ಕøತಿಕ ಅಸ್ಮಿತೆಯಾಗಿರುವ ಕನ್ನಡವನ್ನು ಮರೆಯದಿರಿ ಎಂದು ಹಿರಿಯ ಸಾಹಿತಿ ಹೇಳಿದ್ದಾರೆ.

ಕಲಬುರಗಿ ಜಿಲ್ಲಾ 17ನೇ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಅವರು, ಕಲಬುರಗಿಯ  ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಡಿಸೆಂಬರ್ 8 ಮತ್ತು 9 ರಂದು ಎರಡು ದಿನ ಕಾಲ ಆಯೋಜಿಸಿರುವ ಕಲಬುರಗಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದರು.

ಕನ್ನಡಿಗರು ಉದ್ಯೋಗ ಅರಸಿ ನಾಡು ಬಿಟ್ಟು ದೇಶ, ವಿದೇಶ ಹೋಗಬೇಕಾದಾಗ ಜಾಗತಿಕ ಭಾಷೆಯಾಗಿರುವ ಇಂಗ್ಲೀಷ್ ಅವಶ್ಯಕ. ಮಾತೃ ಭಾಷೆ ಕನ್ನಡ “ಅನ್ನ” ಕೊಡುವ ಭಾಷೆಯಾಗಿಯೂ ಮಾರ್ಪಡಲಿ. ಕನ್ನಡದಲ್ಲಿ ಕಲಿತವರಿಗೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ದೊರಕುವಂತಾಗಲಿ. ಕರುನಾಡಿನಲ್ಲಿ ಎಲ್ಲರೂ ಕನ್ನಡದಲ್ಲಿಯೇ ಮಾತನಾಡುವಂತಾಗಬೇಕು ಎಂದ ಅವರು ಕನ್ನಡಿಗರೆ ಕನ್ನಡ ಬರುವುದಿಲ್ಲವೆಂಬ ಕುಂಠಿತ ಬೆಳವಣಿಗೆ ಸರ್ವಥಾ ಸಾಧುವಲ್ಲ ಹಾಗೂ ಸಮರ್ಥನೀಯವೂ ಅಲ್ಲ ಎಂದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಂಚ ಕೊಟ್ಟರೂ ಬದುಕಿ ಉಳಿಯದ ಮಗು!

ಆ ಶಿಶು ಆಗಷ್ಟೇ ಜನಿಸಿ ಎರಡು ದಿನಗಳಾಗಿತ್ತು. ಸರಕಾರಿ ಆಸ್ಪತ್ರೆಯಾಗಿದ್ದರೂ ಅಲ್ಲಿ ಎಲ್ಲ ಚಿಕಿತ್ಸೆಗೂ ...

news

ಲೈಂಗಿಕ ಕಾರ್ಮಿಕರಿಗೆ ಏನು ಬೇಕಾಗಿದೆ ಗೊತ್ತಾ?

ಲೈಂಗಿಕ ಕಾರ್ಮಿಕರ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆ ವತಿಯಿಂದ ರಾಜಧಾನಿಯಲ್ಲಿ ಬೃಹತ್ ಜಾಥಾ ...

news

ಜಯಲಲಿತಾ ಸಾವಿನ ಪ್ರಕರಣ ತೀವ್ರಗೊಂಡ ವಿಚಾರಣೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಸಾವಿನ ಸುತ್ತ ಎದ್ದಿರುವ ...

news

ಪೊಲೀಸರಿಂದ ಬಂಧನಕ್ಕೊಳಗಾದ ವಾಟಾಳ್ ನಾಗರಾಜ್

ಕನ್ನಡ ಪರ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ರನ್ನು ಪೊಲೀಸರು ಬಂಧಿಸಿದ್ದಾರೆ.