ಪ್ರವಾಹದಿಂದ ನಲುಗಿದ ಉತ್ತರ ಕರ್ನಾಟಕ ಭಾಗದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಿಗಡಾಯಿಸಿದೆ.ಎಲ್ಲಾ ದಾನಿಗಳು ಜನರಿಗೆ ಆಹಾರ ಹಾಗೂ ದಿನನಿತ್ಯದ ವಸ್ತುಗಳನ್ನು ನೀಡುತ್ತಿದ್ದಾರೆ. ಆದರೆ ಅಲ್ಲಿನ ಜಾನುವಾರುಗಳು ಆಹಾರವಿಲ್ಲದೆ ನಲುಗಿವೆ. ಈ ಜಾನುವಾರುಗಳಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮಸ್ಥರು 11 ಲೋಡ್ ಮೇವನ್ನು ಹೊತ್ತು ಉತ್ತರ ಕರ್ನಾಟಕ ಭಾಗಕ್ಕೆ ತೆರಳಿದ್ದಾರೆ.ಪ್ರವಾಹದಿಂದ ಉತ್ತರ ಕರ್ನಾಟಕ ಭಾಗ ಸಂಪೂರ್ಣವಾಗಿ ನಲುಗಿದ್ದು, ಇಲ್ಲಿನ ಜನ ಊಟಕ್ಕೂ ಹರಸಾಹಸ ಪಡುವಂತಾಗಿದೆ. ಇನ್ನೂ ಇಲ್ಲಿನ ಜಮೀನು