ಕೊರೊನಾ ವೈರಸ್ ನಿರಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್ ಡೌನ್ ಉಲ್ಲಂಘಿಸಿದವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗುತ್ತಿದೆ. ಬಳ್ಳಾರಿಯ ಹೊಸಪೇಟೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ 15 ಜನರ ಮೇಲೆ ಮರಿಯಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಗೊಲ್ಲರಹಳ್ಳಿ ಗ್ರಾಮದ ಮುಖಂಡರಾದ ಕಾಳಪ್ಪ ಫಕ್ಕಿರಪ್ಪ, ಜಿ.ಬಿ.ನಾಗರಾಜ, ದಾಸರ ವೆಂಕಟೇಶ, ಕೋಮಾರಪ್ಪ, ಅನಂತಪ್ಪ ಡಿ.ಕೆ, ಸುರೇಶ ಮೈಲಪ್ಪ, ಕೆಂಚಪ್ಪ ಕಾಳಪ್ಪ, ಸಣ್ಣ ಹನುಮಂತಪ್ಪ, ನಾಗರಾಜ