ಲಾಕ್ಡೌನ್ ಅವಧಿಯಲ್ಲಿ ಯಾವುದೇ ಅಗತ್ಯ ಕಾರಣಗಳಿಲ್ಲದೇ ಅನವಶ್ಯಕವಾಗಿ ಓಡಾಡುವ ವಾಹನ ಸವಾರರ ಲೈಸೆನ್ಸ್ ರದ್ದುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಲೈಸನ್ಸ್ ಹಾಗೂ ಹಾಗೂ ವಾಹನದ ನೋಂದಣಿಯನ್ನು ರದ್ದು ಮಾಡಲಾಗುವುದು ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಎಚ್ಚರಿಕೆ ನೀಡಿದ್ದಾರೆ.ಕೊವಿಡ್ 19 ವೈರಾಣು ಹರಡದಂತೆ ಈಗಾಗಲೇ ಇಡೀ ದೇಶಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಅದರಂತೆ ಜಿಲ್ಲೆಯಲ್ಲೂ ನಿಷೇಧಾಜ್ಞೆ ಜಾರಿ ಮಾಡಿ, ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಈ ಎಲ್ಲಾ ನಿರ್ಬಂಧಗಳ ನಡುವೆಯೂ