ನವದಹಲಿ : ಕೊರೊನಾ ಭೀತಿ ಹಿನ್ನಲೆಯಲ್ಲಿ ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡುವುದಾಗಿ ಇಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಇಂದು ಮೊದಲ ಹಂತದ ಲಾಕ್ ಡೌನ್ ಕೊನೆಯ ದಿನವಾದ ಹಿನ್ನಲೆಯಲ್ಲಿ ಇಂದು ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹೊಸ ಭಾಗಗಳಿಗೆ ವೈರಸ್ ಹರಡದಂತೆ ನೋಡಿಕೊಳ್ಳಬೇಕು. ಎಲ್ಲರಿಂದಲೂ ಲಾಕ್ ಡೌನ್ ಮುಂದುವರಿಸುವ ಬೇಡಿಕೆ ಬಂದಿದೆ. ಆದ ಕಾರಣ ಇನ್ನು 19 ದಿನಗಳ ಕಾಲ ಲಾಕ್ ಡೌನ್ ಮುಂದುವರಿಸಲಾಗಿದೆ