ಸಿಎಂ ಬಿಎಸ್ ವೈ ತವರು ಜಿಲ್ಲೆಯ ಜನರಿಂದ ಲಾಕ್ ಔಟ್ ಆದೇಶ ಉಲ್ಲಂಘನೆ

ಶಿವಮೊಗ್ಗ| pavithra| Last Modified ಬುಧವಾರ, 25 ಮಾರ್ಚ್ 2020 (09:52 IST)
: ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವನ್ನೇ ಲಾಕ್ ಔಟ್ ಮಾಡಿದ್ದರೂ ಕೂಡ ಸಿಎಂ ಬಿಎಸ್ ವೈ ತವರು ಜಿಲ್ಲೆಯಲ್ಲಿ ಜನರು ಲಾಕ್ ಔಟ್ ನ್ನು ಉಲ್ಲಂಘನೆ ಮಾಡಿದ್ದಾರೆ.


ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಇಡೀ ದೇಶವನ್ನು ಲಾಕ್ ಔಟ್ ಮಾಡಿದ್ದು, ಯಾರು ಹೊರಗೆ ಬರದಂತೆ ಮನವಿ ಮಾಡಿದ್ದಾರೆ. ಮಾತ್ರವಲ್ಲ ರಾಜ್ಯದಲ್ಲೂ ಕೂಡ ಅವರು ರಾಜ್ಯದ ಜನರು ಲಾಕ್ ಔಟ್ ಗೆ ಸಹಕಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.


ಹೀಗಿದ್ದರೂ ಕೂಡ ಸಿಎಂ ತವರು ಜಿಲ್ಲೆಯಾದ ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಜನಜಂಗುಳಿ ಸೇರಿದೆ. ಲಾಕ್ ಔನ್ ಆದೇಶ ಉಲ್ಲಂಘಿಸಿ ಜನರು ವಸ್ತುಗಳ ಖರೀದಿಗೆ ಗುಂಪು ಗುಂಪಾಗಿ ಸೇರಿಕೊಂಡಿದ್ದಾರೆ. ಇಷ್ಟೇಲ್ಲಾ ಆಗುತ್ತಿದ್ದರೂ ಕೂಡ ಪೊಲೀಸರು ಈ ಕಡೆ ಬಂದಿಲ್ಲ, ಜನರನ್ನು ಚದುರಿಸುವ ಕೆಲಸ ಮಾಡಿಲ್ಲ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :