ರಾಜ್ಯಾದ್ಯಂತ ಆರ್ ಟಿ ಒ ಕಛೇರಿ ಗಳ ವಿರುದ್ದ ದೂರು ಬಂದಿದ್ದು,ದೂರಿನ ಅನ್ವಯ ಇವತ್ತು ಪರಿಶೀಲನೆ ನಡೆಸಲಾಗಿದೆ.ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ನೇತೃತ್ವದಲ್ಲಿ RTO ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು,ನಗರದ ಎಲ್ಲಾ RTO ಕಚೇರಿ ಸೇರಿದಂತೆ ಯಲಹಂಕ, ಯಶವಂತಪುರ, ಜಯನಗರ, ಇಂದಿರಾನಗರ,ಜ್ಞಾನ ಭಾರತಿ ಸೇರಿದಂತೆ ನಗರದ ಕಚೇರಿಗಳ RTO ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಜಯನಗರ ಆರ್ ಟಿ ಒ ಕಚೇರಿಗೆ ಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್.