ಹಿಂದೂ ಎಂಬುದು ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕೆಂಡಾಮಂಡಲರಾಗಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ವಿಕಿಪಿಡಿಯಾ, ಯಾವುದೋ ಪುಸ್ತಕ ನೋಡಿ ಹೇಳಿಕೆ ಕೊಡೋದಲ್ಲ. ವಿಕಿಪಿಡಿಯಾ ವಿಶ್ವಾಸಾರ್ಹತೆ ಎಷ್ಟಿದೆ ಅಂತ ಗೊತ್ತೇ ಇದೆ. ಅದರ ಮುಖ್ಯಸ್ಥ ಜೈಲಿನಲ್ಲಿ ಇದ್ದು ಬಂದವನು. ವಿಕಿಪಿಡಿಯಾ ಮೇಲೆ ಸಾಕಷ್ಟು ಕೇಸ್ಗಳು, ಆರೋಪಗಳಿವೆ. ಅದನ್ನು ನಂಬಿಕೊಂಡು ಬಹಿರಂಗ ಸಭೆಯಲ್ಲಿ ಪ್ರತಿಪಾದಿಸುವುದು ಸರಿಯಲ್ಲ. ಕಾಂಗ್ರೆಸ್ ತನ್ನ ನಿಲುವನ್ನ ಸ್ಪಷ್ಟವಾಗಿ ತಿಳಿಸಬೇಕು.