ನಟ ಸುದೀಪ್ಗೆ ಬೆದರಿಕೆ ಪತ್ರ ಪ್ರಕರಣದ ತನಿಖೆ ನಡೆಸುತ್ತಿರುವ CCB ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಜೊತೆಯಲ್ಲಿದ್ದವರೇ ಸುದೀಪ್ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಪೂರಕವಾದ ಒಂದಿಷ್ಟು ಅಂಶಗಳು ತನಿಖೆಯಲ್ಲಿ ಬಯಲಾಗಿವೆ. ಪೊಲೀಸರ ಶಂಕೆ ಖಚಿತವಾದರೆ ಜೊತೆಯಲಿದ್ದವರಿಗೆ ಜೈಲು ಶಿಕ್ಷೆ ಖಚಿತವಾಗಲಿದೆ. ಈಗಾಗಲೇ ಸಿನಿರಂಗದವರ ಕೈವಾಡವಿದೆ ಅಂತ ಸುದೀಪ್ ನೇರವಾಗಿ ಆರೋಪ ಮಾಡಿದ್ದಾರೆ. ಸುದೀಪ್ ಜೊತೆಯಲ್ಲಿದ್ದವರನ್ನು ಸಿನಿರಂಗದ ವ್ಯಕ್ತಿಯೊಬ್ಬ ಬಳಸಿಕೊಂಡಿರುವ ಬಲವಾದ ಗುಮಾನಿ ಪೊಲೀಸರಿಗೆ ಇದೆ.