ಕುಮಟಾ : ಪರಂಪರಾನುಗತ ಪ್ರಾಚೀನ ಕಲೆಗೆ ಆಧನಿಕ ತಂತ್ರಜ್ಞಾನದ ಸ್ಪರ್ಶ ನೀಡಿರುವ ಪ್ರಯೋಗಕ್ಕೆ ಪ್ರೇಕ್ಷಕರು ಶಭಾಷ್ ಎಂದಿದ್ದಾರೆ. ಯಕ್ಷಗಾನದ ಆಟವೊಂದರಲ್ಲಿ ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತು ತರುವ ದೃಶ್ಯವನ್ನು ಮರು ನಿರ್ಮಿಮಿಸಿರುವ ತಂತ್ರಜ್ಞಾನ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಲಾಗಂಗೋತ್ರಿ ತಂಡ ಆಡಿದ್ದ ಸಂಜೀವಿನಿ ಎಂಬ ಆಟದಲ್ಲಿ ಈ ಪ್ರಯೋಗವನ್ನು ಮಾಡಲಾಗಿದೆ. ಯಕ್ಷಗಾನ ವೇದಿಕೆಯ ಮೇಲೆ ನೂರಾರು ಅಡಿ ಎತ್ತರದಿಂದ ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತು ತರುವ