ಕಾಡಿನ ಚಿರತೆಗಳು ನಾಡಿನ ರಸ್ತೆಯಲ್ಲೇ ಲವ್, ರೋಮ್ಯಾನ್ಸ್ ಮಾಡಿ ಗಮನ ಸೆಳೆದಿವೆ. ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಚಿರತೆಗಳೆರಡು ರಸ್ತೆ ಮಧ್ಯೆಯೇ ಕೆಲ ಕಾಲ ಮಿಲನ ನಡೆಸಿವೆ. ಚಿರತೆಗಳ ರೋಮ್ಯಾನ್ಸ್ ವಿಡಿಯೋ ಕಾರು ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಮಚವಾಡಿ ಗ್ರಾಮದ ಎಣ್ಣೆಹೊಳೆ ದೇವಸ್ಥಾನದ ಬಳಿ ರಾತ್ರಿ 9 ಗಂಟೆ ಸಮಯದಲ್ಲಿ ಎರಡು ಚಿರತೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಇದೇ ವೇಳೆ ಕಾರು ಚಾಲಕ ಚಿರತೆಗಳು ಮಿಲನ ನಡೆಸುತ್ತಿರುವುದನ್ನು