Widgets Magazine

ಪ್ರೇಮಿಗಳ ದಿನದಂದೇ ವಿಷ ಕುಡಿದ ಶಿಕ್ಷಕಿ : ಶಿಕ್ಷಕನಿಂದ ಲವ್ , ದೋಖಾ

ಹಾಸನ| Jagadeesh| Last Modified ಶುಕ್ರವಾರ, 14 ಫೆಬ್ರವರಿ 2020 (20:14 IST)
ಶಿಕ್ಷಕಿಯೊಬ್ಬಳು ಪ್ರೇಮಿಗಳ ದಿನದಂದೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಶರಣಾದ ಶಿಕ್ಷಕಿಯನ್ನು ರಾಣಿ ಅಂತ ಗುರುತಿಸಲಾಗಿದೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಸಹ ಶಿಕ್ಷಕನಾಗಿದ್ದ ಧನಂಜಯ್ ಎಂಬಾತ ಶಿಕ್ಷಕಿ ರಾಣಿಯೊಂದಿಗೆ ಲವ್, ರೋಮ್ಯಾನ್ಸ್ ಮಾಡಿದ್ದು ಮೊದಲೇ ಮದುವೆಯಾಗಿರೋ ವಿಷಯವನ್ನು ಮುಚ್ಚಿಟ್ಟು ದೋಖಾ ಮಾಡಿದ್ದಾನೆ.

ಧನಂಜಯ್ ಗೆ ಮೊದಲೇ ಮದುವೆಯಾಗಿದ್ದರೂ ರಾಣಿ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದನು. ಹಣ ಪಡೆದು ಹಾಗೂ ಪ್ರೀತಿಗೆ ಮೋಸ ಮಾಡಿದ ಧನಂಜಯ್ ನ ಮೋಸದಿಂದಾಗಿ ರಾಣಿ ಹಾಸನದ ಬೇಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :