ನಾನು ಸಿನಿಮಾ ಮಾಡಬೇಕಿದೆ. ಒಳ್ಳೆ ಹೆಸರು ಗಳಿಸಬೇಕಿದೆ. ಹೀಗಾಗಿ ನೀನು ಅದನ್ನು ತರಲೇಬೇಕು ಅಂತ ಸುಂದರವಾಗಿದ್ದ ಹೆಂಡತಿಗೆ ಒತ್ತಾಯಿಸುತ್ತಿದ್ದ ಗಂಡನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ. ಸುಂದರವಾಗಿದ್ದ ಪತ್ನಿಗೆ ಇದೀಗ ಅವಳ ಸೌಂದರ್ಯ ಹಾಗೂ ಪತಿಯ ಸಿನಿಮಾ ಹುಚ್ಚು ಮುಳುವಾಗಿದೆ. ಗೃಹಿಣಿ ಜಯಶ್ರೀ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿ ಸುಬ್ರಮಣಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸಿನಿಮಾ ಮಾಡ್ತೀನಿ ಅಂತ ಹೇಳ್ತಿದ್ದ ಗಂಡ, ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ.