ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿ ಮಾಡಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ಮಾಡಬಾರದ ಕೆಲಸ ಮಾಡಿದ್ದಾನೆ. ಕಾಲೇಜಿನ ಮೂರನೇ ಮಹಡಿಯಲ್ಲಿ ಹುಡುಗಿ ಜೊತೆ ಜಗಳ ನಡೆದ ಬಳಿಕ ಪ್ರಿಯತಮೆಗೆ ಪ್ರಿಯಕರನೇ ಚಾಕು ಇರಿದು ಕೊಲೆಗೆ ಮುಂದಾಗಿದ್ದಾನೆ. ಆ ಬಳಿಕ ಪೊಲೀಸರ ಬಂಧನ ಭೀತಿಯಿಂದಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಗಾಯಗೊಂಡಿದ್ದಾನೆ. ಮಧ್ಯಪ್ರದೇಶದ ಬುರ್ಹಾನಪುರದಲ್ಲಿ ಈ ಅಮಾನೀಯವ ಘಟನೆ ನಡೆದಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.