ಪೊಲೀಸ್ ಠಾಣೆಯಲ್ಲೇ ಮದ್ವೆ ಆದ ಲವರ್ಸ್!

ರಾಯಚೂರು, ಬುಧವಾರ, 13 ಫೆಬ್ರವರಿ 2019 (12:58 IST)

ಪ್ರೇಮಿಗಳಿಬ್ಬರು ಪೊಲೀಸ್ ಠಾಣೆಯಲ್ಲೇ ಹಾರ ಬದಲಾಯಿಸಿಕೊಂಡ ಮದುವೆಯಾದ ಘಟನೆ ನಡೆದಿದೆ.

ಮೂರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಪ್ರೇಮಿಗಳಿಬ್ಬರು ರಾಯಚೂರಿನ ನೇತಾಜಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ವಿವಾಹವಾದರು.

ರಾಜೇಶ ಮಾದಿಗ ಹಾಗೂ ಸಂಧ್ಯಾರಾಣಿ ಪ್ರೇಮ ವಿವಾಹವಾದ ಜೋಡಿ. ಇಬ್ಬರು ಅನ್ಯ ಜಾತಿಯವರಾಗಿದ್ದು, ಠಾಣೆಯಲ್ಲೇ ನವಜೀವನಕ್ಕೆ ಕಾಲಿಟ್ಟರು. 

ಸ್ಥಳೀಯ ಉಪ ನೋಂದಣಿ ಕಾರ್ಯಾಲಯದಲ್ಲಿ ವಿವಾಹ ನೋಂದಣಿ ಮಾಡಿಸಿ, ನಂತರ ದಲಿತ ಸಂಘರ್ಷ ಸಮಿತಿ ಹಾಗೂ ಮಹಿಳಾ ಪೊಲೀಸರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡರು. ಇದಕ್ಕೂ ಮುಂಚೆ ಎರಡೂ ಕುಟುಂಬಸ್ಥರ ಮನವೊಲಿಸಿ ರಾಜಿ ಮಾಡಿಸಿ, ನಂತರ ಠಾಣೆಯಲ್ಲಿ ಸರಳವಾಗಿ ಮದುವೆ ಮಾಡಲಾಯಿತು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಶಾಸಕರ ಬೆಂಬಲಿಗರಿಂದ ಮನೆ ಧ್ವಂಸ?

ಬಿಜೆಪಿ ಶಾಸಕರ ಬೆಂಬಲಿಗರೊಬ್ಬರು ಮನೆಯೊಂದನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಶಾಸಕರ ...

news

ಭೂಮಿಯಲ್ಲಿ ಜೀವಂತ ಅನುಷ್ಠಾನ ಕುಳಿತ ಸ್ವಾಮೀಜಿ ಯಾರು?

ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಭೂಮಿಯಲ್ಲಿ ಜೀವಂತ ಅನುಷ್ಠಾನ ಕುಳಿತಿದ್ದಾರೆ.

news

ಬಂಡಾಯಗಾರರೊಂದಿಗೆ ನಾನಿಲ್ಲ ಎಂದ ಉಮೇಶ್ ಜಾಧವ

ಕಾಂಗ್ರೆಸ್ ನ ಬಂಡಾಯಗಾರರೊಂದಿಗೆ ನಾನು ಇಲ್ಲ. ಅಲ್ಲದೇ ನಾನು ಮುಂಬೈಗೂ ಹೋಗಿಲ್ಲ. ಹೀಗಂತ ಕೈ ಪಾಳೆಯದ ಶಾಸಕ ...

news

ತಮ್ಮ ಪರಿಸ್ಥಿತಿಯನ್ನು ರೇಪ್‍ಗೆ ಒಳಗಾದವರ ಪರಿಸ್ಥಿತಿಗೆ ಹೋಲಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡ್ರಾ ಸ್ಪೀಕರ್?

ಬೆಂಗಳೂರು : ನಿನ್ನೆ ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಪರಿಸ್ಥಿತಿಯನ್ನು ರೇಪ್‍ಗೆ ಒಳಗಾದವರ ...