ಕೊರೊನಾ ಭೀತಿಯಲ್ಲೂ ಮನೆಬಿಟ್ಟು ಓಡಿಹೋದ ಲವರ್ಸ್

ತಿರುವನಂತಪುರಂ| Jagadeesh| Last Modified ಗುರುವಾರ, 9 ಏಪ್ರಿಲ್ 2020 (17:01 IST)
ಜಾಗತಿಕವಾಗಿ ಕೊರೊನಾ ವೈರಸ್ ಭೀತಿ ಮನೆ ಮಾಡಿದೆ. ಆದ್ರೂ ಈ ಲವರ್ಸ್ ಮಾತ್ರ ಮನೆ ಬಿಟ್ಟು ಓಡಿ ಹೋಗಿ ಸುದ್ದಿಯಾಗಿದ್ದಾರೆ.
ತಮ್ಮ ಮಗಳು ಕಾಣೆಯಾಗಿದ್ದಾಳೆ ಅಂತ ಹುಡುಗಿಯ ಮನೆಯವರು ಕೇಸ್ ಹಾಕಿದ್ದರು. ಹುಡುಗಿ ಜೊತೆಗೆ ಹುಡುಗನನ್ನೂ ಪೊಲೀಸರು ಪತ್ತೆ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. > > ಹುಡುಗಿಗೆ 22 ವರ್ಷ ಹಾಗೂ ಹುಡುಗನಿಗೆ 22 ವರ್ಷವಾಗಿದ್ದರಿಂದಾಗಿ ಅವರನ್ನು ಹೋಗಲು ನ್ಯಾಯಾಧೀಶರು ಸೂಚಿಸಿದರು. ಹುಡುಗಿ ಮೇಜರ್ ಆಗಿದ್ದು, ಇಚ್ಛೆಯಿಂದಲೇ ಹುಡುಗನೊಂದಿಗೆ ಹೋಗಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.
ಕೇರಳದ ಕೊಜಿಕೋಡ್ ನಲ್ಲಿ ಈ ಘಟನೆ ನಡೆದಿದ್ದು, ಬೇರೆ ಬೇರೆ ಸಮುದಾಯದಕ್ಕೆ ಸೇರಿದ ಈ ಜೋಡಿಯ ಮೇಲೆ ಇದೀಗ ಪೊಲೀಸರು ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ.
 

ಇದರಲ್ಲಿ ಇನ್ನಷ್ಟು ಓದಿ :