ಎಂ ಜಿ ರಸ್ತೆಯಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಬಹುತೇಕ ಸರ್ಕಲ್ ಗಳಲ್ಲಿ ಜನರೇ ಕಾಣುತ್ತಿಲ್ಲ. ಕೋವಿಡ್ -19 ಸೋಂಕು ನಿಯಂತ್ರಿಸಲು ಜಾರಿಗೊಳಿಸಿರುವ ರವಿವಾರದ ಲಾಕ್ ಡೌನ್ ಗೆ ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೆಳಿಗ್ಗೆಯಿಂದ ಸಂಚಾರ ವಿರಳವಾಗಿತ್ತು. ಅಂಗಡಿ-ಮುಂಗಟ್ಟು ಗಳು ಮುಚ್ಚಿದ್ದು, ನಗರದ ಹೃದಯ ಭಾಗವಾದ ಮಹಾತ್ಮ ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವಾಜಿ ಸರ್ಕಲ್ ಬಿಕೋ ಎನ್ನುತ್ತಿವೆ.ಪ್ರಮುಖ ರಸ್ತೆಗಳಲ್ಲಿ ಜನರು ಓಡಾಡುತ್ತಿಲ್ಲ. ರಸ್ತೆಗೆ ಬಂದವರನ್ನು ಪೊಲೀಸರು ಮರಳಿ ಕಳಿಸುತ್ತಿದ್ದಾರೆ.